Monday, March 11, 2013

SOUGHT!

ಒಮ್ಮೆ ತಿಂಗಳ ಕೆಳಗೆ ತಿಮ್ಮಪ್ಪನ ನೆನೆಪು ಆಯಿತು ನೋಡಬೇಕು ಎಂದು ಆಸೆ ಬಂದಿತು .

ತಿಮ್ಮಪ್ಪನನ್ನು ನೋಡುವುದು ಸುಲಭವಲ್ಲ . ನಾನು ಅವನನ್ನೇ ಕೇಳಿದೆ ನನಗೆ ದರ್ಶನ ಕೊಡು ಎಂದು .

ಕೇಳಿದ್ದನ್ನು ಮರತೆ . ನನ್ನವರ ೬ ೯ ನೇ ಹುಟ್ಟುಹಬ್ಬ ಶುಕ್ರವಾರ ಬರುವುದನ್ನು ನೋಡಿ ತಿರುಪತಿಗೆ ಹೋಗಿ

ಬರುವಾ ಎಂದು ಯೋಚನೆ ಬಂತು . ಲಿಲ್ಲಿ ಪ್ರಭಾ ಬರಲು ಒಪ್ಪಿಕೊಂಡರು ಪ್ಲಾನ್ ಆಗಿಹೋಯಿತು .

ಪ್ರಭ ತಂಗಲು ಮತ್ತು ಊಟಕ್ಕೆ ಏರ್ಪಾಟು ಮಾಡಿದಳು . ೯ ರ ಬೆಳಿಗ್ಗೆ ಇನ್ನೋವ ದಲ್ಲಿ ನಾವು ೫ ಜನ ಹೊರಟೆವು .

ಕೋಲಾರದ ಬಳಿ ನರಸಿಂಹ ತೀರ್ಥ ಎಂಬ ರಾಯರ ಮತದಲ್ಲಿ ದ್ವಾದಸಿ ಪಾರಣೆ ಆಯಿತು .  ತಿರುಚಾನೂರಿನಲ್ಲಿ

ದಿವ್ಯ ದರುಶನ ಪ್ರಸಾದ ವಾಯಿತು . ಮಂಗಾಪುರದಲ್ಲಿ ಅದ್ಬುತ ಘಟನೆ ನಡೆಯಿತು . ದರುಶನ ಮಾಡಿ

ಹೊರಗೆ ಬಂದಾಗ ಪುರೋಹಿತರು ನಮ್ಮವರ ಬಳಿ ಬಂದು ಸಿಹಿ ಪೊಂಗಲನ್ನು ಕೊಟ್ಟುಹೋದರು . ನಮಗೆ

ಇದು ದೇವರೇ ಬಂದು ಕೊಟ್ಟ ಆಶಿರ್ವಾದ ಎನ್ನಿಸಿತು . ರಾತ್ರಿ ೧ ೦ ಗಂಟೆಗೆ ತಿಮ್ಮಪ್ಪನ ದರುಶನ ಸೊಗಸಾಗಿ ಆಯಿತು

ಹಣ ಶ್ರಮ ವ್ಯಯವಿಲ್ಲದೆ . ಆಗ ನೆನಪಾಯಿತು ನನ್ನ ಕೋರಿಕೆ . "ನನ್ನಪ್ಪ ನಿನ್ನ ನೆನಪಿನಲ್ಲಿ ನನ್ನನ್ನು ಸದಾ ಇಟ್ಟಿರು "

ಎಂದು ಪ್ರಾರ್ಥಿಸಿ ಸಿಹಿ ಅನುಭವದಲ್ಲಿ ಮುಳುಗಿದೆ . 

No comments:

Post a Comment