Sunday, March 31, 2013

nANU!

ಹರಿ ಸ್ತಬ್ದನಾಗಿ ನಿಂತಳು  . ಮನಸ್ಸು ತೂಗಾಡಿತು . ಮಗು ,ಮಗಳ ಮಗು ಕಣ್ಣು ಬಿಟ್ಟ ದಿನದಿಂದ ಒಡನಾಡಿದ ಮಗು .

ಮನದ ಸಂದು ಗೋಂದಿನ ಮೂಲೆ ಗಳಲ್ಲಿ ತಾನೇ ತನಾದ ಮಗು . "ಹೋಗು "ಎಂದಿತು . ನನಗಾಗಿ ಮಗುವಲ್ಲಿ

ನಗುಬರಲಿಲ್ಲ . ಓಹೋ ಎಂದು ಮನಸ್ಸು ನೋವುತಿನ್ನತೊಡಗಿತು . ಭಾಗವತದ ಪುಟಗಲ್ಲನ್ನು ತಿರುವಿಹಾಕುತ್ತಾ

ಮನಸ್ಸನ್ನು ಮುದವಾಗಿಸಲು ಹರಿ ಪ್ರಯತ್ನ ನಡೆಸಿದಳು . ಕಣ್ಣು ಒಂದು ಕಡೆ ನಾಟಿತು . ಗೋಕರ್ಣ UPAKYANA .

ಗೋಕರ್ಣ ತಂದೆಗೆ ಉಪದೆಶಕೊಡುವ ಸಂದರ್ಬ . "ತಂದೆಯೇ ಈ ಮನೆ ಮಕ್ಕಳ ವ್ಯಾಮೋಹದ ಹೊರಗೆ ಬನ್ನಿ .

ನಿತ್ಯ ವಾಗಿರುವ ಹರಿಯನ್ನು ನೋಡಿ ,ಮನದಲ್ಲಿ ನಿಲ್ಲಿಸಿ , ಪೂಜಿಸಿ ಅಲ್ಲಿ ನಿಮಗೆ ಸಂತಾಪ ಇರುವುದಿಲ್ಲ . ವ್ಯಾಮೋಹದ

ಇನ್ನೊಂದು ಮುಕವೇ ದುಕ್ಕ . "

ಇದಲ್ಲವೇ ಪರಿಸರದಲ್ಲಿನ ಪರಮಾತ್ಮ ! ಭಕ್ತರ ಪಾಲಿನ ಬೆಳದಿಂಗಳು!

No comments:

Post a Comment