Friday, December 13, 2013

nice days in Dec!

I always had an admiration for Sri Krishnapremi.

He speaks with the honey of Bhakthi.I heard he was giving  talks in Krishna temple.

planned to go,and listened to his talks on Ambareesha and Rama.very satisfying.

Sampath"s cooperation in that regard is crowning glory.

The talk went on till 9 30 pm.We had asurprise in having paddu and Ram attend it.

Paddu"s coming made me happy and felt she will be blessed and Ram"s coming I took as Sri Rama

coming to take us back. Next morning I wanted to meet The great person KKrishna premi.

I came to know people sought his blessings.I went,again thanx to sampth,I stood in the queue

with fruits in my hand,I saw every one carrying some rice and jaggary.I felt Itoo should have brought

 it. I spoke my mind to the lady who stood next to me.She took out a packet of rice from her bag

and gave it to me to be given to the AACHARYA.I went dumb at the turn of events.

As I offered and bowed down at his feet,I felt I achieved some great feet!

Sunday, November 24, 2013

Nov2013!

ಸಂಬ್ರಮ ಸಂಬ್ರಮ ! ಅದ್ಬುತವಾಗಿ ! ನಡೆಯಿತು ೧೭ ರಿಂದ ೨೪ರ ವರೆಗೆ !

ಆ ದೇವ ದೇವನು ನಡೆಸಿಕೊಟ್ಟ ನನ್ನಮದುವೆಯ ದಿನದ ವಾರ .

೧೭ರಂದು ಪರಕಾಲ ಮಟದಲ್ಲಿ ಪೂಜೆ ಆಶೀರ್ವಾದ . ಕಾರ್ತೀಕ ಪೋರ್ನಮಿಯಂದು

ಬೀಗರ ಔಥನ ,ಆಶೀರ್ವಾದ,ಉಡುಗೊರೆ

೨೧ರಂದು ಸಿರಿ ದಂಪತಿಗಳಿಂದ ,ತಂಗಿಯರಿಂದ,ತಮ್ಮನಿಂದ,ಅತ್ತೆಮನೆಯಿಂದ ,ಶಾಮಲ ಳಿಂದ

ಶುಭ ಹಾರ್ಯೇಕೆಯ ಸುರಿಮಳೆ ೨೨ರಂದು ಲೀಲು ಆಗಮನ ಹಾರೈಕೆ ಉಡುಗೊರೆ

೨೪ರಂದು ಶ್ರೀನಿವಾಸ ಕಲ್ಯಾಣ ,ಬಂದುಗಳ ಆಗಮನ ,ಉದುಗರೇ,ತಾಂಬೂಲ,ದಕ್ಷಿಣೆ ಗಾಲ ಧಾನ

ಅತ್ತೆ ಇಂದ ಆಶೀರ್ವಾದ ಉಡುಗೊರೆ .ಪದ್ದು ಇಂದ ಉಡುಗೊರೆ !

ಸುಂದರ ಜೀವನಕ್ಕೆ ಇನ್ನೆನುಬೇಕು ?

ದೇವರೇ ಸದಾ ನಿನ್ನ ನೆನಪು ನನಗಿರಲಿ .ನನ್ನ ಪ್ರೀತಿ ಎಲ್ಲರಿಗು ಇರಲಿ .

ನಿನ್ನ ಆಶೀರ್ವಾದ ಮಗಳ ಮನೆಯಮೆಲಿರಲಿ 

Sunday, November 17, 2013

Muda thanda dina!

ಮೈಸೂರಿಗೆ ಹೋಗಲು ನಿರ್ಧಾರ ಮಾಡಿದೆ!.ಆಲ್ಲಿರುವ ನಾಲಕ್ಕು ಬಂದುಗಳಿಗು ತಿಳಿಸಿದೆ .

ಎಲ್ಲರಿಗೂ ಸಂತೋಷವಾಯಿತು ಊಟಕ್ಕೆ ಬಾ ಎಂದುಕರೆಯಲಿಲ್ಲ .ಸರಿ ಊಟ ನನ್ನ ಜವಾಬ್ದಾರಿ ಎಂದುಕೊಂಡೆ .

ಬೆಂಗಳೂರಿನಲ್ಲಿ ಇರುವ ಲೀಲುಗೆ ಹೇಳಿದೆ ಹೋಗುವ ಸಮಾಚಾರ . ಅವಳ ಒಂದು ಕೆಲಸ ಇತ್ತು  ಪಾರಕಾಲ ಮಠಕ್ಕೆ

ಹೋಗಿ ಸ್ವಾಮಿಗಳಿಗೆ ಅವಳಕುಮಾರ ಬರೆದಿರುವ ಪುಸ್ತಕವನ್ನು ಕೊದಬೇಕಾಗಿತ್ತು .ಸರಿ ಎಂದೆ ಮೈಸೂರಿನಲ್ಲಿ ಕೆಲಸವಾದ

ನಂತರ ಮಠಕ್ಕೆ ಹೋದೆವು ಅಲ್ಲಿ ಮಹಾಮಂಗಳಾರತಿ ಆಗುತಿತ್ತು . ಅದರಲ್ಲಿ ಬಾಗಿಗಲಾದೆವು . ಸ್ವಾಮಿಗಳು ನಮ್ಮವರನ್ನು

ಕರೆದು ಶಾಲು ಹೊದಿಸಿ ,ಪ್ರಸಾದ ಕೊಟ್ಟು ಆಶೀರ್ವದಿಸಿದರು . ಅಸ್ತಕ್ಕೆ ಸಂತೋಷ ತುಂಬಿ ಬಂಟು . ನಂತರ ಅಲ್ಲೇ

ಓತಮಾದಬೆಕೆನ್ದು ಆತ್ಮೀಯವಾಗಿ ಹೇಳಿದರೂ . ಸೊಗಸಾದ ಸವಿಯಾದ ಊಟಮಾಡಿ ,ದೇವರಿಚ್ಚೆ ಯನ್ನು ತಿಳ್ದುಕೊಂಡು

ಸಂತೋಷದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದಿವಿ 

Tuesday, November 5, 2013

ILLUSION!

GOPAMMA,sat on the doordtep,recalling the days in her 80years of life.

yes,she would turn 80 in two days.She married a man with three kids.

she had entered this house with her dreams,like any other girl.

she bore three kids,and brought them up with the love and expectations of any other mother.

She was kind to other kids, but her kids were her preference.

15years ago her man left her with her kids and left for the abode above.

A month earlier she was filled with the hopes of big programme for her 80th year,

like any other mom.Her most loved son stayed in her house with her.

Her daughter in law ahd come home with one month old boy,she was very happy to bring him up

Whatelse is there ?Give all yours to your kds.Kids make the world.

This morning a phone call from her nephew askng her son to permit him to come and take his aunt home to celebrate her birth day, got his permission.

Tomorrow she would go to her sister"s house for her birth day.

Thursday, October 31, 2013

Light!





ಬೆಳಕನ್ನು ನಾ ಕಂಡೆ ,

ರವಿ ಮೂಡಿದಂತಾಯಿತು
ಬೆಳ್ಳಿ ಬೆಳಗ್ಗೆ
ಮಗು ನನ್ನ ನೋಡಿ ನಗು ನಕ್ಕ
ನನ್ನ ಮನಸ್ಸಿನಲ್ಲಿ ಚೇತನ ಹೊಸ ಚೇತನ
ನರ್ತಿಸಿತು
ಮಗು ಆಕಾಶದಲ್ಲಿ ನಡೆದ ಸಂತೋಷ
ನನ್ನ ಮೈ ಮನದಲ್ಲಿ ತುಂಬಿತು
ನೂರುವರುಷ ಹರುಶದಿಂದಿರು ಮಗುವೆ
ಎಂದು ನನ್ನ ಮನಸ್ಸು ಹಾಡಿತು

 

Saturday, June 22, 2013

cosmic intelligence!

Janu stood at the door,as she came to close,at the close of the day.

she recollected the events that made the day.The previous day she woke up

to the thought it was the EKADASHI and the fact the next day was DWADASHI

on a FRIDAY,and she must mark it with some one receiving thamboolam.

The day closed with her feeling ill and the thoughts pushed to the back row.

As the next day progressed she went well and did her usual pooja in the evening

and went out for astroll.She happened to meet a lady,who had similar thoughts

of giving Thamboolam.she invited her home and returned the thamboolam

relishing the event and acknowledging the the intelligence that works

in its own pattern.

Thursday, June 13, 2013

cosmos!


I got a call from my friend asking for the contact number of another

friend of mine.I had asked for  a favour for that friend,to get her a situation.

I called back this friend to let her know

At that time,she had come out of the temple and thinking of me

as she would always call on me after her visit to the temple on Thursdays!

Oh God let her get a job of her liking.

Tuesday, May 21, 2013

saagara!

ಸಾಗರ ದ ಬಳಿ ನಿಂತೆ . ತಲೆ ಎತ್ತಿ ಆಕಾಶವನ್ನು ನೋಡಿದೆ . ಸಾಗರ ಆಕಾಶ ಎರಡು ನೀಲಿಯಾಗಿ

 ನಿಂತವು . ಅನಂತವು ನೀಲಿ ಎಂದು ಸಾರುತ್ತಾ . ಸಾಗರದಲ್ಲಿ ಅಲೆಗಳು ನಿಲ್ಲದೆ ನರ್ತಿಸಿದವು .

ಒಂದು ಅಲೆ ಇನ್ನಾದರ ಬಳಿ ಸ್ಪರ್ದೆ ಮಾಡುವರೀತಿ . ಅದ ನೋಡಿ ನಗು ಬಂತು

ಸಾಗರ ವಿಲ್ಲದೆ ಅಲೆ ಇಲ್ಲ . ಗೆದ್ದ ಸೋತ ಅಲೆಗೆಲ್ಲ ಸಾಗರವಲ್ಲವೇ ಕಾರಣ !!

Thursday, April 11, 2013

VIJAYA!

೧ ೧ APRIL ವಿಜಯ ಸಂವತ್ಸರ ಆರಂಬವಾಯಿತು . ಬೆಳಗ್ಗೆ ಎದ್ದು ಸ್ನಾನಮಾಡಿ ದೇವರಿಗಾಗಿ ಎರಡು

ಒಬ್ಬಟ್ಟು ಮಾಡಿದೆ . ಒಹ್ ಏನು ಸೊಗಸಾಗಿ ಬಂತು ನಿಜಕ್ಕೂ ಆ ದೇವದೆವನಿಗೆ ಸಂತೋಷವಾಗಿರಬೇಕು

ನನ್ನ ನೈವೇದ್ಯ !

ನೈವೇದ್ಯ ಆದನಂತರ ಅಳಿಯದೇವರು ಮಗು ವನ್ನು ಕರದುಕೊಂಡು ಬಂದರು ಸ್ವಲ್ಪ ರುಚಿನೋಡಿ ಚೆನ್ನಾಗಿದೆ ಎಂದರು

ಇದು ದೇವರು ಹೇಳಿದ ಮಾತು .

ಮಗಳು ಅಳಿಯನಿಗೆ ತಾಂಬೂಲ ದಕ್ಷಿಣೆ ಕೊಟ್ಟಮೇಲೆ ,ಅಳಿಯಂದಿರು ಹೊಸ ವಸ್ತ್ರ ವನ್ನು ತಂದರು

ಇದು ದೇವರ ಕೆಲಸವಲ್ಲವೇ?

ನಾನು ಹೊಸ ವಸ್ತ್ರ ದರಿಸಿ ದಿನವನ್ನು ಆರಂಬಿಸಿದೆ ,ಲೀಲು ಕೊಟ್ಟ ಉಡುಗೊರೆ .

ಮಗಳು ಅಳಿಯ ಊಟ ಮಾಡಿ ಆಸ್ವಾದಿಸಿದರು

ಮಗಳು ಬಂದು ಒಬ್ಬಟ್ಟನ್ನು ಮಾಡಿದಳು . ಪ್ರತಿ ಒಂದು ಘಟನೆಯೂ ಅಪರೂಪವಾಗಿ ಆ ದೇವ ದೇವನ ಆಶೀರ್ವಾದವನ್ನು

ತೋರಿಸಿದೆ . ಆ ದೈವಕ್ಕೆ ತಲೆಬಾಗಿ ನಮಸ್ಕರಿಸುವೆ



 

Sunday, April 7, 2013

naama roopa!

ಅರುಣ ಕಣ್ಣು ತೆಗೆದಾಗ ರವಿ ಕಿರಣಗಳನ್ನು ಹರಡುತಿದ್ದ . ಸುಂದರ ಬೆಳಗು ಸುಂದರದಿನವನ್ನು ಸಾರುವನ್ತಿತ್ತು .

ಮನಸ್ಸು ಹಗುರವಾಗಿ ಕಳೆದ ದಿನದ ನೆನಪು ಮನವನ್ನು ತುಂಬಿತು . ಕಳೆದ ಬೆಳಗು ಬಾಗಿಲು ತೆಗೆಯುತ್ತಿದ್ದಂತೆ

ಮಗಳ ದರುಶನ ಅಳಿಯನ ಒಡನೆ ಆಯಿತು . ಅಳಿಯ ಹೇಳಿದರು ಅವರು BRHILLS ಗೆ ಹೋಗುವ ನಿರ್ಧಾರ .

ಮಗಳು ಮೌನವಾಗೇ ಹೌದು ಎಂದಳು . ಸರಿ ಅವರಮನೆ ಸೇರಿ ಅವರು ಹೋಗಲು ತಯಾರಿ ನಡೆಸಿದರು

ಅರುಣ ಅವಳ ಮನೆಕೆಲಸ ದಲ್ಲಿ ಮುಳುಗಿದಳು . ೧ ೧ ಗಂಟೆಗೇ ಅವರೂ ಹೊರಟಾಯಿತು . ಮಗುವಿಗಾಗಿ ಇರಲಿಎಂದು

ಕೊಟ್ಟ ಅವಲಕ್ಕಿಯನ್ನು ಬೇಡ ಎಂದಳು ಮುದ್ದಿನ ಮಗಳು . ಕೊಟ್ಟಿದ್ದನ್ನ ತೆಗೆದುಕೊಂಡು thanx ಎಂದಿದ್ದರೆ ಅರುನಳಿಗೆ

ಸಂಥೂಶವಗಿರುಥಿತ್ತು . ಮಗುವಿಗಾಗಿ ಆಪಲ್ ಇದೆ ಎಂದರು ಅಳಿಯದೇವರು . ಅರುಣಳಿಗೆ ಅರ್ಥವಗದೆಇದ್ದದ್ದು

ಮಗುವಿಗಾಗಿ ಸರಿಯಾಗಿ ತಯಾರಿ ಏಕೆ ಮಾಡಲಿಲ್ಲವೆಂದು . ಪಕ್ಕದ ಮನೆಯಲ್ಲಿ ಇರುವ ತಂದೆ ತಾಯಿಗಳ ಕಥೆ

ಇದೆ ಏನೂ! ಆದರೇ ಅರುಣ ಅವಳ ತಂದೆ ತಾಯಿಗಳ ಜೊತೆಯಲ್ಲೇ ಇದ್ದಳು ಇಂಥ ಘಟನೆ ನಡೆದ ನೆನಪಿಲ್ಲಾ . ಅಮ್ಮಾ

ಇದ್ದಿದ್ದರೆ  ಕೆಳಿರಬಹುದಿತ್ತು !
ಮನಸೆಲ್ಲಾ ದಿನವೆಲ್ಲಾ ಅವಳ ಬಗ್ಗೇ ಯೋಚಿಸುತಿತ್ತು .

ನೆನಪಾಯಿತು ನಾಮ ರೂಪ ಗಳ ಆಚೆ ಇರುವ ಪರಮಾತ್ಮನಲ್ಲಿ ಮನಸಿಟ್ಟರೆ ಮನದ ದುಗುಡ ಕಳೆದು

ಮನಸ್ಸಿಗೆ ಶಕ್ತಿ ಬರುವ ವಿಷಯ ಹಾಗೇ ಗೆದ್ದಳು ಅರುಣ. ಮಗಳು ಅಳಿಯ ಮಗುವಿನೊಡನೆ  ಸುಖ ವಾಗಿದ್ದಳು

BRHILLS ನಲ್ಲಿ 

Sunday, March 31, 2013

nANU!

ಹರಿ ಸ್ತಬ್ದನಾಗಿ ನಿಂತಳು  . ಮನಸ್ಸು ತೂಗಾಡಿತು . ಮಗು ,ಮಗಳ ಮಗು ಕಣ್ಣು ಬಿಟ್ಟ ದಿನದಿಂದ ಒಡನಾಡಿದ ಮಗು .

ಮನದ ಸಂದು ಗೋಂದಿನ ಮೂಲೆ ಗಳಲ್ಲಿ ತಾನೇ ತನಾದ ಮಗು . "ಹೋಗು "ಎಂದಿತು . ನನಗಾಗಿ ಮಗುವಲ್ಲಿ

ನಗುಬರಲಿಲ್ಲ . ಓಹೋ ಎಂದು ಮನಸ್ಸು ನೋವುತಿನ್ನತೊಡಗಿತು . ಭಾಗವತದ ಪುಟಗಲ್ಲನ್ನು ತಿರುವಿಹಾಕುತ್ತಾ

ಮನಸ್ಸನ್ನು ಮುದವಾಗಿಸಲು ಹರಿ ಪ್ರಯತ್ನ ನಡೆಸಿದಳು . ಕಣ್ಣು ಒಂದು ಕಡೆ ನಾಟಿತು . ಗೋಕರ್ಣ UPAKYANA .

ಗೋಕರ್ಣ ತಂದೆಗೆ ಉಪದೆಶಕೊಡುವ ಸಂದರ್ಬ . "ತಂದೆಯೇ ಈ ಮನೆ ಮಕ್ಕಳ ವ್ಯಾಮೋಹದ ಹೊರಗೆ ಬನ್ನಿ .

ನಿತ್ಯ ವಾಗಿರುವ ಹರಿಯನ್ನು ನೋಡಿ ,ಮನದಲ್ಲಿ ನಿಲ್ಲಿಸಿ , ಪೂಜಿಸಿ ಅಲ್ಲಿ ನಿಮಗೆ ಸಂತಾಪ ಇರುವುದಿಲ್ಲ . ವ್ಯಾಮೋಹದ

ಇನ್ನೊಂದು ಮುಕವೇ ದುಕ್ಕ . "

ಇದಲ್ಲವೇ ಪರಿಸರದಲ್ಲಿನ ಪರಮಾತ್ಮ ! ಭಕ್ತರ ಪಾಲಿನ ಬೆಳದಿಂಗಳು!

Monday, March 11, 2013

SOUGHT!

ಒಮ್ಮೆ ತಿಂಗಳ ಕೆಳಗೆ ತಿಮ್ಮಪ್ಪನ ನೆನೆಪು ಆಯಿತು ನೋಡಬೇಕು ಎಂದು ಆಸೆ ಬಂದಿತು .

ತಿಮ್ಮಪ್ಪನನ್ನು ನೋಡುವುದು ಸುಲಭವಲ್ಲ . ನಾನು ಅವನನ್ನೇ ಕೇಳಿದೆ ನನಗೆ ದರ್ಶನ ಕೊಡು ಎಂದು .

ಕೇಳಿದ್ದನ್ನು ಮರತೆ . ನನ್ನವರ ೬ ೯ ನೇ ಹುಟ್ಟುಹಬ್ಬ ಶುಕ್ರವಾರ ಬರುವುದನ್ನು ನೋಡಿ ತಿರುಪತಿಗೆ ಹೋಗಿ

ಬರುವಾ ಎಂದು ಯೋಚನೆ ಬಂತು . ಲಿಲ್ಲಿ ಪ್ರಭಾ ಬರಲು ಒಪ್ಪಿಕೊಂಡರು ಪ್ಲಾನ್ ಆಗಿಹೋಯಿತು .

ಪ್ರಭ ತಂಗಲು ಮತ್ತು ಊಟಕ್ಕೆ ಏರ್ಪಾಟು ಮಾಡಿದಳು . ೯ ರ ಬೆಳಿಗ್ಗೆ ಇನ್ನೋವ ದಲ್ಲಿ ನಾವು ೫ ಜನ ಹೊರಟೆವು .

ಕೋಲಾರದ ಬಳಿ ನರಸಿಂಹ ತೀರ್ಥ ಎಂಬ ರಾಯರ ಮತದಲ್ಲಿ ದ್ವಾದಸಿ ಪಾರಣೆ ಆಯಿತು .  ತಿರುಚಾನೂರಿನಲ್ಲಿ

ದಿವ್ಯ ದರುಶನ ಪ್ರಸಾದ ವಾಯಿತು . ಮಂಗಾಪುರದಲ್ಲಿ ಅದ್ಬುತ ಘಟನೆ ನಡೆಯಿತು . ದರುಶನ ಮಾಡಿ

ಹೊರಗೆ ಬಂದಾಗ ಪುರೋಹಿತರು ನಮ್ಮವರ ಬಳಿ ಬಂದು ಸಿಹಿ ಪೊಂಗಲನ್ನು ಕೊಟ್ಟುಹೋದರು . ನಮಗೆ

ಇದು ದೇವರೇ ಬಂದು ಕೊಟ್ಟ ಆಶಿರ್ವಾದ ಎನ್ನಿಸಿತು . ರಾತ್ರಿ ೧ ೦ ಗಂಟೆಗೆ ತಿಮ್ಮಪ್ಪನ ದರುಶನ ಸೊಗಸಾಗಿ ಆಯಿತು

ಹಣ ಶ್ರಮ ವ್ಯಯವಿಲ್ಲದೆ . ಆಗ ನೆನಪಾಯಿತು ನನ್ನ ಕೋರಿಕೆ . "ನನ್ನಪ್ಪ ನಿನ್ನ ನೆನಪಿನಲ್ಲಿ ನನ್ನನ್ನು ಸದಾ ಇಟ್ಟಿರು "

ಎಂದು ಪ್ರಾರ್ಥಿಸಿ ಸಿಹಿ ಅನುಭವದಲ್ಲಿ ಮುಳುಗಿದೆ . 

Saturday, February 23, 2013

Memorable!

೨ ೩ ನೇ ಶನಿವಾರ ಅವಿಸ್ಮರಣೀಯ ಮಗು ಅಭ್ಯುದಯ ಮುದ್ದಾಗಿ stagemele ಬಂದು ನಿಂತಾ 

ತಾತ ,ಆಜ್ಜಿ ಆನಂದ ದಿಂದ ತುಮ್ಬಿಹೋದರು . ಅಭ್ಯು ಶಾಲೆಯ ಪರವಾಗಿ ಅಜ್ಜಿ ಎರಡು ಮಾತು ಸಬೆಯಲ್ಲಿ 

ಹೇಳಿಬಂದರು . ಮೈಸೂರಿನ ಅಜ್ಜಿ ಬೆಂಗಳೂರಿನಲ್ಲಿ ಸಬೆಯಲ್ಲಿ  ಹೇಗೆ ?

ನಂಬಲು ಕಷ್ಟ . ಇದೇ ಜಗತ್ತಿನ ವಿಚಿತ್ರ .ಆಜ್ಜಿಗೆ ಶಾಲೆಯಮೇಲೆ ಮೆಚ್ಚಿಗೆ ಇತ್ತು

ಅದು ನಾಲ್ಕು ಜನಕ್ಕೆ ತಿಳಿಯಲಿ ಎಂದು ದೈವ ನಿರ್ಣಯಿಸಿತು . ಒಟ್ಟಿನಲ್ಲಿ ಅಜ್ಜಿಗೆ ಸಂತೋಷ

ಮಗು ಅಭ್ಯುಗೆ ಸಹ ಸಂತೋಷ ಇದು ಅಜ್ಜಿಗೆ ದೈವದ ವರ . 

Friday, February 22, 2013

The Stranger!

Feb,22nd attended Vibha"s wedding.The mahootha was late,and all the time at disposal.

sat in leisure and spent time watching the ladies,appreciating their involvement and special wears.

A man sat next to me and introduced himself .He was Srinivasan from Nagamangala ,uncle of

Somyasree.He seems to believe in talking and sharing what he believes is essential.

He asked me what my zodiac sign,and talked about what type of a person I was,most of it happened

to be correct.He added my best time begins in May,and whatever is bothering would be solved.

He continued and asked me to offer prayer to The Sun,which incidently I had begun a week since

and asked me to offer pooja on Friday,wearing traditional dress,saree,that too occurred to me a week

since.I am again convinced of the Consciouness of Universe that does guide, if you develop

sensitivity to environment.I thanked my guardian angel!

Sunday, February 17, 2013

RATHASAPTHAMI!

ಭಾನುವಾರ ರಥಸಪ್ತಮಿ ಅಪರೂಪ ಎಂದು ಕೇಳಿ ,೧೭ನೇ ಬಾನುವಾರ ಬಂದ ರಥಸಪ್ಥಮಿಯನ್ನು ಸುಂದರವಾಗಿ 

ಅನುಭವಸಬೀಕೆನ್ದುಕೊಂಡ ಆಸೆಯನ್ನು ಬಹಳ ಸುಂದರವಾಗಿ ನಡೆಸಿಕೊಟ್ಟ ಅಚ್ಯುಥನಿಗೆ ನಮೋ ನಮೋ .

ಅಂದು ಬೆಳಿಗ್ಗೆ ೫ ಗಂಟೆಗೇ ಎದ್ದು ಮಿಂದು ಸಿಹಿಯಾದ SWEET TENKOLALANNU ಮಾಡಿ  ದೇವರಿಗೆ ಅರ್ಪಿಸಿ 

ಸೂರ್ಯಾಸ್ತೊತ್ತರ SHATHANAMAVALIYANNU ಓದಿ ,ದೇವರಿಗಿ ವಂದಿಸಿ ತಿಂಡಿ ತಿಂದು ಮುಗಿಸಿ 

ಕುಲಿತುಕೊಂದಾಗ  ಮನ್ನಿ ಬಂದು ಇಬ್ಬರಿಗೂ ಉದುಗೊರೆಕೊಟ್ಟು ಹರಸಿದಾಗ ಅಚ್ಯುತ ನೀನೆ ಬಂದು ಆಶೀರ್ವಾದ  ಮಾಡಿದ 

ಅನುಭವದಲ್ಲಿ ತುಮ್ಬಿನಿಂತ್ತೆ .ಸಂಜೆ ಅಪಣ್ಣ ಬಂದು ಮೊಸರನ್ನ ತಿಂದು ಸುಖಸೀನನದಾಗ ಸಂತ್ಹೊಶತುಮ್ಬಿಬಂತು .

ಈ ದಿನ ನೀ ನನಗೆ ಕೊಟ್ಟವರವಲ್ಲದೆ ಮತ್ತಿನ್ನೇನು .ಸದಾ ನಿನ್ನ ನೆನಪಲ್ಲಿ ಇರುವ ಭಾಗ್ಯವನ್ನು ಕೇಳಿಕೊಂಡು ನಿನಗೆ 

ನಮಸ್ಕರಿಸುವೆ .ನಮೋ,ನಮೋ 

Saturday, February 16, 2013

Anubhava!

ಬಾನುವಾರ , ರಥಸಪ್ತಮಿ ಮಾಡೋಣ ಎಂದು ,ಅಕಸ್ಮಾತ್ ಬೆಂಗಳೊರಿಗೆ ಬಂದಿದ್ದ ಅಣ್ಣ,ಅತ್ತಿಗೆ ,ಅನಿತ ನ್ನ ಊಟಕ್ಕೆ

ಕರದೆ ,ಹಾಗೆ ಮೀರಾ,ಪ್ರಕಾಶ್ ಗೊ ಬನ್ನಿಎನ್ದೆ .ಅವರು ಶನಿವಾರನೆ ಬಂದರು ಅರ್ದ ಗಂಟೆಯಲ್ಲೇ ಬಂದವರಿಗೆ

ಅಡಿಗೆ ಮಾಡಿ ಮೈಸುರುಪಕ್ ಊಟಬದಿಸಿದೆ .ನನಗೇ ಹೆಮ್ಮೆ .ಪರವಾಗಿಲ್ಲಾ ಸಮಯಬಂದರೆ ಚೆನ್ನಾಗಿ ಕೆಲಸ

ಮಾಡುತೀನಿ ಎಂದು ಅದರಲ್ಲಿ ಇನ್ನು ಒಂದು ಲಾಭವನ್ನು ನೋಡಿದೆ .ಶನಿವಾರ ಬಂದು ಅವರು ನನ್ನ ಬಾನುವಾರದ

ಕೆಲಸ ಸುಲಭ ಮಾಡಿದರು , ಪದ್ದು ತಾನು ಬಾತ್ ಮತ್ತು ಪೊಂಗಲ್ ತರತೀನಿ ಅಂದು ಬಾನುವಾರದ ಕೆಲಸಕ್ಕೆ

ಇನ್ನುಸುಲಭ ಮಾಡಿದಳು .ಈ ಘಟನೆ ಗಳು ನನ್ನ ಪಾಲಿನ ದೈವದ ಸಹಾಯವನ್ನು ತೋರಿಸುತ್ತಿದೆ .

ಅಚ್ಯುತ ,ಮಾಧವ,ಕೇಶವ ನಿನಗೆ ನಮೋ !

Wednesday, February 13, 2013

My wish!

I always felt my child can show her mind in words

The extract below just tells my wish fulfilled.

Today,wednesday, The good is showering!

long live my child!




I only hope you and anna as well are not tired out trying to get him to sleep.
Hope you had you lunch and are also done with tea.
 
You have a pleasant evening – going for a walk.
I will be back and give you some much needed rest.
I will make chappatis for Prasad – don’t bother…
You would be tired out.
 

Tuesday, February 12, 2013

VARA!

TUESDAY,Started,rather with clouds,only to give light

that feels great as it was clouded!

My child,my world,made me feel,my expectations in her will never go wrong

They are home by 7,have the luxury of going out before retiring

and added glow,unexpectedly,abhyu said," pati istu"

LOKADYAKSHA,SURADYAKSA,VISHVAKARMA,TAMONUDAHA!

Sunday, February 10, 2013

sooryanarayana!

Sunday,10th Feb,I learnt aws MOUNI AMAVASYE,

I KNOW NOTHING about its significance,but it has something to do with the Sun.

It happened so that I had a copy of SOORYA SHATHAKA with me,and I started reciting it.

The day was peaceful.It had added satisfaction.My child was at peace with the world.

My kid friend was reluctant to have food.The whole day ,he dodged.

At night,I got the food ready for him,offered to My aaradya Daiva,requested him to

accept my offering ,and started feeding,my toddler friend.

My offering was accepted totally!

NAMASTE NAMO NARAYANA!

Tuesday, January 29, 2013

The day!

I wondered what should b my Day like! NoI was not sure.

I asked Krishna"give me a fitting day".Wow!

What I had was a treat!

yes, The DAY started very usual way.I went with my routine

siri had made the month special,with a card on each day.

Noone thought the day can have sweets.Its the business of the lady of the house!

why the lady be thought to be given sweets!

so the went.

Abhyu gave a treat by making me put him to sleep.

At 4 30,came two ladies,with love,prayers,sweets and gifts!

My loving sisters! They took me a temple.

It was lovely.The evening bore the glow His love.

MAMA MATHARAM,PITHARA, MAMASARVAM!

aasheervada!

ಅಭ್ಯು ,ನನಗೆ ಕೃಷ್ಣ .ಅವನ ಯೋಗಕ್ಷೇಮ ನನ್ನ ದೇವರ ಪೂಜೆ .

ನಾನು ಕಥೆ ಹೇಳಿ ಅವನು ಮಲಗುತಿದ್ದ .ಕೆಲವು ತಿಂಗಳಿಂದ ನನ್ನ ಸೇವೆ ತಿರಸ್ಕಿರಿಸಿದ್ದ .ಅವನ ಇಚ್ಹೆಯೇ ನನಗೆ

ದೀಪ ಎಂದು ಸುಮ್ಮನಾದೆ .ಇಂದು ನನ್ನ ಹುಟ್ಟಿದ ದಿನ ನನ್ನ ಕೃಷ್ಣ ನನಗೆ ಆಶೀರ್ವಾದ ಮಾಡುವಂತೆ

ನಾನು ಹೇಳಿದ ಕೃಷ್ಣನ ಕಥೆ ಕೇಳಿಕೊಂಡು ನಿದ್ದೆ ಮಾಡಿದ .ಇದಕಿಂತ ಉಡುಗೊರೆ ಬೇಕೇ ?

ಧನ್ಯೋಸ್ಮಿ .ಗೋವಿಂದ ನಿನಗೆ ನನ್ನ ಕೋಟಿ ನಮನ .

Saturday, January 26, 2013

prajne!

೨೫ನೇ Friday ,೨೦೧೩ ಬೆಳಿಗ್ಗೆ ಹಾಗೇ ಅಲೂಚನೆಯಲ್ಲಿ ಮುಳುಗಿದ್ದೆ . ನಾಳೆ ಶನಿವಾರ ಎಲ್ಲಾದರೂ ಹೋಗಬಹುದು

ಎಂದು ಮನಸ್ಸಿಗೆ ಅನ್ನಿಸಿತು .ಎಲ್ಲಿಗೆ?ಉತ್ತರ ಸಿಗಲಿಲ್ಲಾ .ಅಂತರಿಕ್ಷದ ಕಡೆ ನೋಡಿಕೊಂಡು ನೀನೇ ಎಲ್ಲಾದರೂ ಪ್ಲಾನ್

ಮಾಡಿಕೊಡು ಎಂದುಕೊಂಡೆ .ಕೆಲವೇ ಕ್ಷಣದಲ್ಲಿ ಉತ್ತರ ಸಿಕ್ಕಿತು .ಬಿಂಡಿಗನವಿಲೆ ! ಬಿಂದಿಗನವಿಲೆಯಲ್ಲಿ ನನ್ನ ಪ್ರಿಯವಾದ

ಗರುಡ ದೇವರ ಗುಡಿ ಇದೆ .ಸರಿ ನನ್ನವರಿಗೆ ಹೇಳಿದೆ ," ಬಿಂದಿಗನವಿಲೆಗೆ ಹೋಗೋಣವ". ಮೌನವಾಗಿದ್ದರು .ಮೌನ

ಸಮ್ಮತಿ ಸೂಚಕ . ಇಲ್ಲಿಗೆ ಹೋಗಬೇಕಾದರೆ ಏನಾದರೂ ನಂಬರ್ ಇದ್ದರೆ ಪೂಜೆಗೆ arrange ಮಾಡಬಹುದು ಎಂದು

ಲೀಲುಗೆ ಫೋನ್ ಮಾಡಿ ನಮ್ಮ ಒಡನೆ ಬರವಳ ಎಂದು ಕೇಳಿದರೆ ಅವಳ ಸಮ್ಮತಿ ಸಿಕ್ಕಿತು ,ಮತ್ತೆ ಪದ್ದುನ ಕೇಳಿದರೆ

ಅವರು ದಂಪತಿ ಬರುವ ವಿಷಯ ಸಿಕ್ಕಿತು !ಇನ್ನೇನು ಟ್ಯಾಕ್ಸಿ ಫಿಕ್ಸ್ ಆಯಿತು ೨೬ರ ಬೆಳಿಗ್ಗೆ ಪ್ರವಾಸ ಸ್ಟಾರ್ಟ್ ಆಗೆಹೋಯಿತು

ಪ್ರವಾಸ ಮುಗಿಸಿ ಬಂದಾಗ ಮನಸಿನಲ್ಲಿ ಏನೋ ಒಂದು ಹೊಸ ಚೈತನ್ಯ ತುಂಬಿತ್ತು .ಕೇಶವ ನಾಥನ ಸಾನಿದ್ಯ ಮೈ

ಮನಸನ್ನು ತುಮ್ಬಿಸಿತ್ತು .

Wednesday, January 23, 2013

masu-kanasu!

ಮನದಲ್ಲಿ ಬಂದು ಹೋದ ಆಲೋಚನೆಗಳು ,ಕನಸಲ್ಲಿ ಕಂಡ ಘಟನೆಗಳು

ಸೂರ್ಯ ಬಂದಮೇಲೆ ನಿಜವಾಗಬಹುದ?

೨೨,ಏಕಾದಸಿ ,ದಿನನಿತ್ಯದ ಕೆಲಸಗಳು ದಿನವನ್ನು ನುಂಗಿ ರಾತ್ರಿಯಾದಾಗ ಮನಸಲ್ಲಿ ವಿಷ್ಣು ಸಹಸ್ರ ನಾಮ ದ

 ನೆನಪಾಯಿತು  ಮನಸಲ್ಲಿ "ಶ್ರೀರಾಮ ರಾಮೇತಿ ೩ಸಲ ಹೇಳಿಕೊಂಡು ಮಲಗಿದೆ .ಬೆಳಿಗ್ಗೆ ಎದ್ದು ಟಿವಿ ಹಾಕಿದ ತಕ್ಷಣ

ಬಂದಿದ್ದು ,"ವಿಷ್ಣುಸಹಸ್ರನಾಮ".

ಕನಸಲ್ಲಿ ಅಣ್ಣ ಏನೋ ಕೊಡುತ್ತೀನಿ ಎಂದರು ,ಬೆಳಿಗ್ಗೆ ಪೋಸ್ಟ್ ಗಿಫ್ಟ್ ತಂದಿತು ಶೈಲನಿಂದ

ಮುಗಳುನಗು ನಕ್ಕು ಕೆಲಸದಲ್ಲಿ ತೊಡಗಿದೆ 

Sunday, January 20, 2013

Lunch!

The day got us lunch.Thanks to siri Prasad.

Good lunch,thoughtful of the kids.

Enjoyed the outing .I would put it as one of the good turns of Dhanurmasam.

Anything that adds joy is good.I am seeing a great growth in siri.

That's also a gift to me.Her card today made me see her future.

She will make amark.She will add meaning to her surrounding.

She will make her home warm.This I was thinking  and saw a flower from the deity fall down.

Long live my child.Long live my son.May god keep your home lit.

Saturday, January 19, 2013

deepam!

ದೀಪಂ ನಮ್ಮ ಆಚಾರ್ಯರು ನಮಗೆ ದಯಪಾಲಿಸಿರುವ ಮಹತ್ತರವಾದ ಕೃತಿ .ನಾನು ಇದನ್ನು ಓದಿ ಮಗಳಿಗೆ

ದೀಪದ ಮಹತ್ವವನ್ನು ಹೇಳಬೇಕು ಅಂದುಕೊಂಡಿರುವಾಗ ಆವಳಿಂದ ನನಗೆ ಒಂದು ಕಾರ್ಡ್ ಬಂತು

ಅದರಲ್ಲಿ ಆವಳೇ ದೀಪದ ಮಹತ್ವವನ್ನು ತಿಳಿಸಿ ಆ ಜ್ಞಾನಕ್ಕೆ ನನ್ನ ಕೊಡುಗೆ ಇದೆ ಎಂದು ಹೇಳಿರುವುದನ್ನು

ನೋಡಿ ಪರಮಾನಂದ ವಾಯ್ಯ್ತು .ನನಗಿಂತ ಮುಂದೆ ನಡೆದಿದ್ದಾಳೆ ನನ್ನ ಮಗಳು

ಇದಕ್ಕೆ ಆ ದೇವರಿಗೆ ನನ್ನ ಅನಂತ ಪ್ರಣಾಮ ಗಳು 

Friday, January 18, 2013

gift,nevertheless!


 "People who have only good experiences aren't very
interesting. They may be content, and happy after a fashion,
but they aren't very deep. It may seem a misfortune now, and
it makes things difficult, but well -- it's easy to feel all
the happy, simple stuff. Not that happiness is necessarily
simple. But I don't think you're going to have a life like
that, and I think you'll be the better for it. The difficult
thing is to not be overwhelmed by the bad patches. You must
not let them defeat you. You must see them as a gift -- a
cruel gift, but a gift nonetheless."

-- Peter Cameron

~~~

joys of spring.....

lalu stood staring,

lovely thing was said of her.

heaven she saw in her palm

The taste still on the tongue

life all roses,lovely

same evening

she heard

The kid does not like her

she has emotions high and low

kids like only balanced.

I swear,she said

my lows and highs

few and far between.

let me take it

if it is said,it may be so!!

Monday, January 14, 2013

paramathma!

ಅರವತ್ತು ತುಮ್ಬಿದಮೇಲೆ ಆ ದೇವನ ಇರುವಿಕೆ ಚಿಕ್ಕ ಚಿಕ್ಕ ವಿಷಯದಳು ಕಾಣ ಸಿಗುತ್ತಿದೆ .

ಅಂದರೆ ನೋಡುವ ದೃಷ್ಟಿ ಬದಲಾಗಿದೆ .ಹೇಗೆ ? ಎಂದರೆ ಉತ್ತರ ಇಲ್ಲ .ಮನಸ್ಸು ನೋಡುತ್ತೆ .

ಈ ಮಾರ್ಗಶಿರ ಸುಂದರ ವಾಗಿ ಕಳೆಯಿತು .ಪ್ರತಿದಿನವೂ ತಿರುಪ್ಪಾವೈ ಹೇಳಿ ಮನಸ್ಸು ಮದುರವಾಗಿದೆ .

ಮಗು ಶಾಲೆಯಲ್ಲಿ ಸಂತೋಷದಿಂದ ಇಲ್ಲ ಎನ್ನುವ ಮಾತು ಕೇಳಿ ಮನಸ್ಸು ಮುಜುಗರ ವಾಗಿ ಸ್ವಾಮಿಯಲ್ಲಿ ಪ್ರಾರ್ಥನೆ

ಮಾಡಿದೆ ಮಗುವಿಗೆ ಸುಂದರ ಸಮಯ ಸಿಗಲೆಂದು ,ಅಂದು ಮಗು ಬಂದಾಗ ತಿಳಿಯಿತು ದಿನ ಚೆನ್ನಾಗಿತ್ತೆಂದು .

ಭೋಗಿ ಹಬ್ಬ ಪೂಜೆ ಆದಾಗ ದೈವ ಭಕ್ತ ದಂಪತಿ ಗಳು ಬಂದು ನಮ್ಮ ಸತ್ಕಾರ ಸ್ವೀಕರಿಸಿದರು .

ಹಬ್ಬದ ಸಂಜೆ ಮಗುವಿಗೆ ಆರತಿ ಮಾಡ್ತಿದ್ದಾಗ ದಂಪತಿಗಳು ಬಂದರು .ಇವರಲ್ಲಿ ನಾನು ಆ ಪರಮಾತ್ಮನನ್ನು

ನೋಡಿದೆ 

Friday, January 11, 2013

aananda!

ಇವತ್ತು  koodarevellam    !ಆನ್ದಾಳು ತಾಯಿ ಹಾಡಿ ಅನುಗ್ರಹ ಮಾಡಿರುವ ಮುವ್ವತ್ತು ಹಾಡುಗಳಲ್ಲಿ ೨೭ನೆೇ ಪದ್ಯ .

ಈ ಪದ್ಯ ಬಹಳ ಸುಂದರವಾಗಿದೆ .ಸುಂದರವಾದ ಜೀವನ ನಡೆಸಲು ಬೇಕಾದ ಸುಲಭ ವಿದಾನ ಸುಂದರವಾಗಿ ಹೇಳತ್ತುದೆ .

ಪ್ರತಿ ಮಾರ್ಗಶಿರ ದಲ್ಲೂ ಈ ತಾಯಿ ಹೇಳಿರುವ ತಿರುಪ್ಪಾವೈ  ಹೇಳಿ  ತಾಯಿಯ ಆಶಿರ್ವಾದ ಕೂರುವ ಸಂಪ್ರದಾಯ .

ಇವತ್ತು ಕೂದರೆವೆಲ್ಲು ಪಾಶುರ .ಹಾಡಿ ,ಪ್ರಾರ್ಥನೆ ಮಾಡಿ,ಪೊಂಗಲ್ ನೈವೇದ್ಯ ಮಾಡಿ ,ನಾಲಿಗೆ ಸಿಹಿ ಮಾಡಿಕೊಂಡು

ಮನಸ್ಸು ಸುಂದರವಾಗಿ ಬೆಳಗಿನ ಕೆಲಸದಲ್ಲಿ ತೊಡಗಿರುವಾಗ ತಾಯಿಯ ಆಶೀರ್ವಾದ ನನ್ನನ್ನು ತಲುಪಿತು .

ನನ್ನ ಮಗು ,ಈಗತಾನೆ ಮೂವತ್ತು ತುಂಬಿರುವ, ದಿನ ನಿತ್ಯದ  ಸಂಪ್ರದಾಯದಲ್ಲಿ ಬೆಲೆಕೊಡದ ಮಗು ,

ಬಿಸಿ ಬಸಿ ಯಾಗಿ ಪೊಂಗಲ್  ಮಾಡಿ,ತಂದು ,ದೆವೆರಿಗೆ ನೈವೇದ್ಯ ಮಾಡಿದಳು .ನಾಳೆ ಇವಳು aandalu ಹೇಳಿದ

ರೀತಿ ಜೀವನ ನಡೆಸುವಳು ಎಂಬ ನಂಬಿಕೆ ಮನಸ್ಸು ತುಂಬಿತು .ಆನಂದ ಮೈ ಮನದಲ್ಲಿ ತುಂಬಿ ತುಳಕಿತು .

aandalu ತಿರುವದಿಗಳೇ ಶರಣು 

Sunday, January 6, 2013

BirthDay!

ಹುಟ್ಟಿದಹಬ್ಬ ? ಯಾರು ಯಾರಿಗೆ ಮಾಡಬೇಕು?ಇದರ ಅರ್ಥ ವೇನು ?ನನ್ನ ಹುಟ್ಟಿದ ಹಬ್ಬ ಯಾರಿಗೆ ಸಂತೋಷ?

ನನ್ನ ಹುಟ್ಟಿದ ಹಬ್ಬ ಗಳ ನನ್ನ ನೆನಪುಗಳು ಏನು ?ಅಮ್ಮ  ಪ್ರತಿ ಹುಟ್ಟಿದ ಹಬ್ಬಕ್ಕೂ ಪಾಯಸ ಮಾಡುತಿದ್ದರು ಅಲ್ಲಿಗೆ

ಮುಗಿಯುತಿತ್ತು ಮೊದ ಮೊದಲು . ಪ್ರೌಡ ಶಾಲೆಗೆ ಬಂದ ಮೇಲೆ ಉದ್ದುಗೊರೆ ಕೊಡುವ ಕೊಳ್ಳುವ ಅಭ್ಯಾಸ  ಪ್ರಾರಂಬ 

ವಾಯಿತು. ಉಡುಗೊರೆ ಏನಾದರು ಆಗುತಿತ್ತು . ಒಂದು ಪೆನ್ನು ,ಒಂದು ಬಾಕ್ಸ್ ಒಂದು ನೋಟ್ ಬುಕ್ .ಅಲ್ಲಿಗೆ ಸಂತೋಷ

ತ್ಹುಮ್ಬುತಿತ್ತು . ಕಾಲೇಜ್ ನಲ್ಲಿ ಜಾಸ್ತಿಯಾಯಿತು ಸಂಬ್ರಮ . ಹೊಸ ಡ್ರೆಸ್ ,ಸೀರೆ ಕೊಡುವುದು ಕೊಳ್ಳುವುದು ಶುರುವಾಯಿತು .

೨೫ನೇ ವರುಷ  ಅಮ್ಮ ಅಣ್ಣ ತಂಗಿಯರು ಕೊಂಡಾಡಿದರು .೨೯ನೆ ವರುಷ ಶಂಬಿಮಹರಾಜರು ನೆಕ್ಲೆಸ್ ,ಹಸಿರುಬನ್ನದ್ದು

ತಂದಾಗ ,ನನ್ನ ಹುಟ್ಟಿದ ಹಬ್ಬ ಇಷ್ಟು ದೊಡ್ಡ ವಿಷಯವೇ? ಅಂದುಕೊಂಡೆ . ೫೦ನೇ ವರುಷ ಮಹಾ ಸಂಬ್ರಮ .

ಅಮ್ಮ,ಅಣ್ಣ ಮಹಾರಾಜರು ಸೇರಿ ವಜ್ರವನ್ನೇ ತಂದರು ತಂಗಿಯರು .ವಜ್ರದ ಉಂಗುರ ತಂದರು

 ಆಮೇಲೆ ಒಮ್ಮೆ ಮಗಳು ಸಿರಿ ಚಿನ್ನ ದ ಬ್ರ್ಸೆಲೆತ್  ತಂದಳು .

೬೦ ಓದಿಬನ್ತು .ಅಮ್ಮಸೀರೆ ತಂದರು .ಸಿರಿ ಅವಳೇ ನನ್ನ ಇಷ್ಟ ವಾದ ಮ್ಯ್ಸೋರೆಪಕ್ ಮಾಡಿದಳು .ಮಹಾರಾಜರು

ತೀರ್ಥ ಯಾತ್ರೆ ಮಾಡಿಸಿದರು .೬೪,ಪದ್ದು ಲಾಲ್ಬಾಗ್ ಗೆ  ಕರೆದು ಕೊಂಡು ಹೋದಳು .

೬೫ರ ಸಂಬ್ರಮ ಮಗಳು ಸಿರಿ ದಿನಕ್ಕೊಂದು  ಸುಂದರ ವಾದ ಕಾರ್ಡ್ ಮಾಡಿ ,ಮನದಾಲ್ ದಲ್ಲಿರುವ

ಸುಂದರ ಚಿತ್ತ್ರವನ್ನು ಮತ್ತೆ ಕತ್ತಿಕೊದುತಿದ್ದಾಳೆ .ಜೀವನ ಸುಂದರ ವಾದಾಗ ನಿತ್ಯವೂ  ಹುಟ್ಟುಹಬ್ಬವೆ

ನನ್ನ ಬಂದುಗಳೇ ಸುಖವಾಗಿರಿ ನೋರುಕಾಲ .

Saturday, January 5, 2013

cards of light!

ಸಿರಿಯ ಆರನೇ ಕಾರ್ಡ್ ಹೇಳತ್ತೆ ಸಮಯ ಬಂದಾಗ ಹಣ್ಣಿನ ಉಪಯೋಗ ಆಗತ್ತೆ ಅಂತ .ಹಾಗೇ ಉಪದೇಶಗಲ ಉಪಯೋಗ 

ಸಮಯ ಬಂದಾಗ .ಉಪದೇಶ ಕೊಡುವುದು ನಮ್ಮ ಕೆಲಸ ಅದರ ಉಪಯೋಗಕ್ಕೆ ಸರಿಯಾದ ಸಮಯ ಬರಬೇಕು

ಈಶ್ವರನ ಅನುಗ್ರಹ ಇರಬೇಕು .

ಸಿರಿ ನನಗೆ ದಿನಕ್ಕೊಂದು ಕಾರ್ಡ್ ಕೊಟ್ಟು ನನ್ನ ಹುಟ್ಟುಹಬ್ಬದ  ತ್ಹಿಂಗಲ್ಲನ್ನು   ಅಮರವಗಿಸುತತಿದ್ದಾಳೆ

ಇದೆ ನನ್ನ ಸಿರಿ.