Thursday, April 11, 2013

VIJAYA!

೧ ೧ APRIL ವಿಜಯ ಸಂವತ್ಸರ ಆರಂಬವಾಯಿತು . ಬೆಳಗ್ಗೆ ಎದ್ದು ಸ್ನಾನಮಾಡಿ ದೇವರಿಗಾಗಿ ಎರಡು

ಒಬ್ಬಟ್ಟು ಮಾಡಿದೆ . ಒಹ್ ಏನು ಸೊಗಸಾಗಿ ಬಂತು ನಿಜಕ್ಕೂ ಆ ದೇವದೆವನಿಗೆ ಸಂತೋಷವಾಗಿರಬೇಕು

ನನ್ನ ನೈವೇದ್ಯ !

ನೈವೇದ್ಯ ಆದನಂತರ ಅಳಿಯದೇವರು ಮಗು ವನ್ನು ಕರದುಕೊಂಡು ಬಂದರು ಸ್ವಲ್ಪ ರುಚಿನೋಡಿ ಚೆನ್ನಾಗಿದೆ ಎಂದರು

ಇದು ದೇವರು ಹೇಳಿದ ಮಾತು .

ಮಗಳು ಅಳಿಯನಿಗೆ ತಾಂಬೂಲ ದಕ್ಷಿಣೆ ಕೊಟ್ಟಮೇಲೆ ,ಅಳಿಯಂದಿರು ಹೊಸ ವಸ್ತ್ರ ವನ್ನು ತಂದರು

ಇದು ದೇವರ ಕೆಲಸವಲ್ಲವೇ?

ನಾನು ಹೊಸ ವಸ್ತ್ರ ದರಿಸಿ ದಿನವನ್ನು ಆರಂಬಿಸಿದೆ ,ಲೀಲು ಕೊಟ್ಟ ಉಡುಗೊರೆ .

ಮಗಳು ಅಳಿಯ ಊಟ ಮಾಡಿ ಆಸ್ವಾದಿಸಿದರು

ಮಗಳು ಬಂದು ಒಬ್ಬಟ್ಟನ್ನು ಮಾಡಿದಳು . ಪ್ರತಿ ಒಂದು ಘಟನೆಯೂ ಅಪರೂಪವಾಗಿ ಆ ದೇವ ದೇವನ ಆಶೀರ್ವಾದವನ್ನು

ತೋರಿಸಿದೆ . ಆ ದೈವಕ್ಕೆ ತಲೆಬಾಗಿ ನಮಸ್ಕರಿಸುವೆ



 

Sunday, April 7, 2013

naama roopa!

ಅರುಣ ಕಣ್ಣು ತೆಗೆದಾಗ ರವಿ ಕಿರಣಗಳನ್ನು ಹರಡುತಿದ್ದ . ಸುಂದರ ಬೆಳಗು ಸುಂದರದಿನವನ್ನು ಸಾರುವನ್ತಿತ್ತು .

ಮನಸ್ಸು ಹಗುರವಾಗಿ ಕಳೆದ ದಿನದ ನೆನಪು ಮನವನ್ನು ತುಂಬಿತು . ಕಳೆದ ಬೆಳಗು ಬಾಗಿಲು ತೆಗೆಯುತ್ತಿದ್ದಂತೆ

ಮಗಳ ದರುಶನ ಅಳಿಯನ ಒಡನೆ ಆಯಿತು . ಅಳಿಯ ಹೇಳಿದರು ಅವರು BRHILLS ಗೆ ಹೋಗುವ ನಿರ್ಧಾರ .

ಮಗಳು ಮೌನವಾಗೇ ಹೌದು ಎಂದಳು . ಸರಿ ಅವರಮನೆ ಸೇರಿ ಅವರು ಹೋಗಲು ತಯಾರಿ ನಡೆಸಿದರು

ಅರುಣ ಅವಳ ಮನೆಕೆಲಸ ದಲ್ಲಿ ಮುಳುಗಿದಳು . ೧ ೧ ಗಂಟೆಗೇ ಅವರೂ ಹೊರಟಾಯಿತು . ಮಗುವಿಗಾಗಿ ಇರಲಿಎಂದು

ಕೊಟ್ಟ ಅವಲಕ್ಕಿಯನ್ನು ಬೇಡ ಎಂದಳು ಮುದ್ದಿನ ಮಗಳು . ಕೊಟ್ಟಿದ್ದನ್ನ ತೆಗೆದುಕೊಂಡು thanx ಎಂದಿದ್ದರೆ ಅರುನಳಿಗೆ

ಸಂಥೂಶವಗಿರುಥಿತ್ತು . ಮಗುವಿಗಾಗಿ ಆಪಲ್ ಇದೆ ಎಂದರು ಅಳಿಯದೇವರು . ಅರುಣಳಿಗೆ ಅರ್ಥವಗದೆಇದ್ದದ್ದು

ಮಗುವಿಗಾಗಿ ಸರಿಯಾಗಿ ತಯಾರಿ ಏಕೆ ಮಾಡಲಿಲ್ಲವೆಂದು . ಪಕ್ಕದ ಮನೆಯಲ್ಲಿ ಇರುವ ತಂದೆ ತಾಯಿಗಳ ಕಥೆ

ಇದೆ ಏನೂ! ಆದರೇ ಅರುಣ ಅವಳ ತಂದೆ ತಾಯಿಗಳ ಜೊತೆಯಲ್ಲೇ ಇದ್ದಳು ಇಂಥ ಘಟನೆ ನಡೆದ ನೆನಪಿಲ್ಲಾ . ಅಮ್ಮಾ

ಇದ್ದಿದ್ದರೆ  ಕೆಳಿರಬಹುದಿತ್ತು !
ಮನಸೆಲ್ಲಾ ದಿನವೆಲ್ಲಾ ಅವಳ ಬಗ್ಗೇ ಯೋಚಿಸುತಿತ್ತು .

ನೆನಪಾಯಿತು ನಾಮ ರೂಪ ಗಳ ಆಚೆ ಇರುವ ಪರಮಾತ್ಮನಲ್ಲಿ ಮನಸಿಟ್ಟರೆ ಮನದ ದುಗುಡ ಕಳೆದು

ಮನಸ್ಸಿಗೆ ಶಕ್ತಿ ಬರುವ ವಿಷಯ ಹಾಗೇ ಗೆದ್ದಳು ಅರುಣ. ಮಗಳು ಅಳಿಯ ಮಗುವಿನೊಡನೆ  ಸುಖ ವಾಗಿದ್ದಳು

BRHILLS ನಲ್ಲಿ